ತಮ್ಮ
ಬುಡಕ್ಕೆ ಬಿಸಿ
ನೀರು
ಹರಿದಾಗಲೇ ಎಚ್ಚೆತ್ತುಕೊಳ್ಳುವ ಜಾಯಮಾನ
ಈ
ನಮ್ಮ
ಕನ್ನಡ
ಸಿನೆಮಾರಂಗದ ಜನರಿಗೆ. ಈಗ ಕೇಂದ್ರ
ಸರಕಾರ
ಜಾರಿಗೊಳಿಸಿದ ಸರಕು
ಮತ್ತು
ಸೇವಾ
ತೆರಿಗೆ
(ಜಿಎಸ್
ಟಿ)
ಯು
ಕನ್ನಡ ಪ್ರಾದೇಶಿಕ ಚಿತ್ರರಂಗದವರಿಗೆ ನುಂಗಲಾರದ ತುತ್ತಾಗಿದೆ. ಈ
ಹಿಂದೆ
ಬ್ಲಾಕ್
ಮತ್ತು
ವೈಟ್
ಹಣವನ್ನು ಬಳಸುತ್ತಾ, ರಾಜ್ಯ ಸರಕಾರದಿಂದ ಸಂಪೂರ್ಣ
ತೆರಿಗೆ ರಿಯಾಯತಿ ಸವಲತ್ತನ್ನು ಪಡೆಯುತ್ತಾ,
ಯಾವುದಕ್ಕೂ ನೆಟ್ಟಗೆ ಲೆಕ್ಕವಿಡದೇ ಕನ್ನಡ
ಸಿನೆಮಾಗಳನ್ನು ನಿರ್ಮಿಸಲಾಗುತ್ತಿತ್ತು. ಈಗ
ಎಲ್ಲದಕ್ಕೂ ಪಕ್ಕಾ
ಲೆಕ್ಕ
ಇಟ್ಟು
ಸರಕಾರಕ್ಕೆ ಸಲ್ಲಿಸಲೇ ಬೇಕಲ್ಲಾ ಎನ್ನುವುದೇ ನಿರ್ಮಾಪಕರ ವಲಯಕ್ಕೆ ಬಲು
ದೊಡ್ಡ
ಸಂಕಟವಾಗಿದೆ. ಅದಕ್ಕಾಗಿ "ಸಿನೆಮಾ ಎನ್ನುವುದನ್ನು ಮನರಂಜನಾ ಮಾಧ್ಯಮವನ್ನಾಗಿ ನೋಡಬೇಕೆ ಹೊರತು
ವಾಣಿಜ್ಯದ ಮಾನದಂಡದಿಂದ ಅಳೆಯಬಾರದು" ಎಂದು ಎಲ್ಲಾ ನಿರ್ಮಾಪಕರು ಹುಯಿಲಿಡುತ್ತಿದ್ದಾರೆ. ಈ
ತೆರಿಗೆಯ ಗೋಳಿನಿಂದ ರಿಯಾಯಿತಿ ಬೇಕೆಂದು ಒತ್ತಾಯಿಸುತ್ತಿದ್ದಾರೆ.
ಆದರೆ...
ಈಗ
ಚಲನಚಿತ್ರ ಮಾಧ್ಯಮವು ಕೇವಲ
ಮನರಂಜನೆಯ ಮಾಧ್ಯಮವಾಗಿರದೇ ಸಾವಿರಾರು ಕೋಟಿಗಳ
ವ್ಯವಹಾರ ನಡೆಸುವ
ಉದ್ದಿಮೆಯಾಗಿದೆ. ಕೋಟಿಗಳನ್ನು ಹಾಕಿ
ಕೋಟಿಗಳನ್ನು ಗಳಿಸುವ
ವ್ಯಾಪಾರವಾಗಿದೆ. ಇನ್ನೂ
ಸಿನೆಮಾ
ರಿಲೀಜ್
ಆಗಿ
ನಾಲ್ಕು
ದಿನ
ಆಗಿರುವುದಿಲ್ಲಾ ಅಷ್ಟರಲ್ಲಿ ‘ಅಷ್ಟು
ಕೋಟಿ
ಕಲೆಕ್ಷನ್ ಆಯ್ತು, ಇಷ್ಟು ಕೋಟಿ
ಕಲೆಕ್ಷನ್ ಆಯ್ತು’
ಅಂತಾ
ಸಿನೆಮಾದ ನಿರ್ಮಾಪಕರು ಸುಳ್ಳು ಸುಳ್ಳೇ ಬೊಂಬಡಾ
ಬಾರಿಸುತ್ತಾರೆ. ಅಷ್ಟೆಲ್ಲಾ ಕೋಟಿ
ಬಂದಿದ್ದೇ ನಿಜವಾದರೆ ಸರಕಾರಕ್ಕೆ ತೆರಿಗೆ
ಕಟ್ಟಲಿ
ಬಿಡಿ.
ಬಂದ
ಲಾಭವೆಲ್ಲಾ ತಮಗೇ
ಇರಲಿ...
ತೆರಿಗೆಗೆ ಮಾತ್ರ
ರಿಯಾಯಿತಿ ಸಿಗಲಿ
ಅಂದರೆ
ಹೇಗೆ?
ಇಷ್ಟು
ವರ್ಷಗಳ
ಕಾಲ
ಕರ್ನಾಟಕ ಸರಕಾರದಿಂದ ನೂರಕ್ಕೆ ನೂರು
ತೆರಿಗೆ
ರಿಯಾಯತಿಯ ಸವಲತ್ತು ಪಡೆದವರಿಗೆ ಈಗ
ತೆರಿಗೆ
ಕಟ್ಟಿ
ಅಂದ
ತಕ್ಷಣ
ಆತಂಕ
ಶುರುವಾಗಿದೆ.
"ಕನ್ನಡ ಸಿನೆಮಾಗಳಿಗೆ ಸೀಮಿತ
ಮಾರುಕಟ್ಟೆ ಇದೆ
ಹಾಗೂ
ಪರಭಾಷಾ
ಚಿತ್ರಗಳ ಹಾವಳಿ
ಇದೆ"
ಎಂಬ
ಪುರಾತನ
ನೆಪವನ್ನೇ ಮತ್ತೆ
ಮತ್ತೆ
ಹೇಳುತ್ತಾ ತಮ್ಮ
ನ್ಯೂನ್ಯತೆಗಳನ್ನ ಈ
ಸಿನೆಮಾ
ನಿರ್ಮಾತೃಗಳು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಕರ್ನಾಟಕಕ್ಕಿಂತಾ ಚಿಕ್ಕದಾದ ಕೇರಳ
ರಾಜ್ಯದ ಸಿನೆಮಾ ಕ್ಷೇತ್ರವೂ ತನ್ನ
ಸೀಮಿತ
ಮಾರುಕಟ್ಟೆಯನ್ನು ವಿಸ್ತರಿಸುತ್ತಲೇ, ಪರಭಾಷಾ
ಸಿನೆಮಾಗಳ ಪೈಪೋಟಿಯನ್ನು ಎದುರಿಸಿಯೇ ಬೆಳೆಯುತ್ತಿದೆಯಲ್ಲಾ. ಯಾಕೆಂದರೆ ಮಲಯಾಳಿಗಳು ತಮ್ಮ ವೃತ್ತಿಪರತೆಯಿಂದಾ ಉತ್ತಮವಾದ ಪ್ರಯೋಗಶೀಲ ಸಿನೆಮಾಗಳನ್ನು ತಯಾರಿಸುತ್ತಾರೆ. ನಮ್ಮ
ವ್ಯಾಪಾರಿ ಸಿನೆಮಾದ ನಿರ್ಮಾತೃಗಳು ಕಥೆ,
ಕಲೆ,
ವೃತ್ತಿಪರತೆಗಳಿಗಿಂತಾ ಸಿನೆಮಾದಿಂದ ಬರುವ
ಲಾಭದತ್ತ ಮಾತ್ರ
ಗಮನವಿಟ್ಟಿರುತ್ತಾರೆ. ಆಗ
ಹುಟ್ಟುವ ಮಸಾಲೆ
ಸಿನೆಮಾಗಳು ಜನರಿಂದ
ತಿರಸ್ಕರಿಸಲ್ಪಡುತ್ತವೆ. ತಮ್ಮ
ಪ್ರೊಡಕ್ಟ್ ಕಳಪೆಯಾಗಿದ್ದನ್ನು ಮರೆಮಾಚಿ ಪರಭಾಷಾ
ಚಿತ್ರಗಳ ಹಾವಳಿ.. ಅದು ಇದು ಎಂದು
ನೆಪ
ಹೇಳತೊಡಗುತ್ತಾರೆ.
ಚುನಾವಣಾ ಸಂದರ್ಭದಲ್ಲಿ ಕನ್ನಡ
ಚಿತ್ರರಂಗದ ಬಹುತೇಕರು ಪ್ರತ್ಯಕ್ಷವಾಗಿ ಹಾಗೂ
ಪರೋಕ್ಷವಾಗಿ ಬಿಜೆಪಿ
ಪಕ್ಷವನ್ನು ಬೆಂಬಲಿಸಿದ್ದರು. ದೇಶಾದ್ಯಂತ ಏಕ
ಭಾಷೆ,
ಏಕ
ಸಂಸ್ಕೃತಿ, ಏಕ
ಆರ್ಥಿಕ
ನೀತಿ
ಇರಬೇಕೆಂಬುದು ಸಂಘ
ಪರಿವಾರದ ಪ್ರಮುಖ
ಅಜೆಂಡಾ
ಆಗಿದೆ.
ಆದರೂ
ಮೋದಿ
ಮೋಡಿಗೆ
ಒಳಗಾಗಿ
ಬಿಜೆಪಿಯ ಜಂಡಾ
ಹಿಡಿದವರು ಅನೇಕರು.
ಆದರೆ
ಈಗ
ಅದೇ
ಮೋದಿ
ಸರಕಾರ
ದೇಶಾದ್ಯಂತ ಜಿಎಸ್ಟಿ
ಎನ್ನುವ
ಏಕರೂಪದ
ತೆರಿಗೆಯನ್ನು ಹೇರಿದೆ.
ಇದರಿಂದ
ಸಿನೆಮಾ
ಕ್ಷೇತ್ರವೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ
ಏಕರೂಪದ
ತೆರಿಗೆ
ಹೇರಿಕೆಯಿಂದ ಹಿಂದಿ
ಚಿತ್ರರಂಗವು ಪ್ರಾದೇಶಿಕ ಸಿನೆಮಾ
ಕ್ಷೇತ್ರವನ್ನು ಸಾವಕಾಶವಾಗಿ ಆಪೋಷಣ
ತೆಗೆದುಕೊಳ್ಳುತ್ತದೆ. ಕೇಂದ್ರ
ಸರಕಾರದ
ಉದ್ದೇಶವೂ ಇದೇ
ಆಗಿದೆ.
“ಒಂದು
ದೇಶ
ಒಂದೇ
ಭಾಷೆ”
ಎನ್ನುವ
ಬಿಜೆಪಿಯ ಹಿಡನ್
ಅಜೆಂಡಾ
ಈಗ
ಏಕರೂಪದ
ತೆರಿಗೆ
ಹೇರಿಕೆ
ಮೂಲಕ
ಜಾರಿಯಾಗುತ್ತಿದೆ. ಮೇಲ್ನೋಟಕ್ಕೆ ಈ
ತೆರಿಗೆ
ಎನ್ನುವುದು ಆರ್ಥಿಕ
ವ್ಯವಹಾರ ಎನ್ನುವಂತೆ ತೋರಿದರೂ ನೇಪತ್ಯದಲ್ಲಿ ಪ್ರಾದೇಶಿಕ ಭಾಷೆ
ಹಾಗೂ
ಸಂಸ್ಕೃತಿಯನ್ನು ನಿಧಾನವಾಗಿ ನಾಶ
ಮಾಡುವುದರಲ್ಲಿ ಸಂದೇಹವಿಲ್ಲ.
ಆರ್ಥಿಕ
ಹೊರೆ
ಎನ್ನುವ
ಕಾರಣಕ್ಕೆ ಸಿನೆಮಾದವರು ಈಗ
ಜಿಎಸ್ಟಿಯನ್ನು
ವಿರೋಧಿಸುತ್ತಿದ್ದಾರೆ. ಈಗ
ಸಿನೆಮಾದವರಿಗೆ 28 % ನಿಂದಾ
18 % ಗೆ
ತೆರಿಗೆ
ಇಳಿಕೆ
ಮಾಡಿದ
ಕೇಂದ್ರ
ಸರಕಾರ
ಪ್ರತಿರೋಧದ ಶಮನ
ಮಾಡಲು
ಪ್ರಯತ್ನಿಸಿದೆ. ಇನ್ನೂ ಹೆಚ್ಚು
ಒತ್ತಡ
ತಂದರೆ
ರಾಜ್ಯ
ಸರಕಾರ
ಮತ್ತೆ ಜನರ ಹಣದಿಂದ ಸಬ್ಸಿಡಿ ಕೊಡಬೇಕಾಗುತ್ತದೆ. ಆದರೆ
ಕನ್ನಡ
ಚಲನಚಿತ್ರ ರಂಗದವರು ವಿರೋಧಿಸಬೇಕಾದದ್ದು ಕೇವಲ
ತೆರಿಗೆಯನ್ನಷ್ಟೇ ಅಲ್ಲಾ
ಅದರ
ಹಿಂದಿರುವ ಸಂಘ
ಪರಿವಾರದ ಶಡ್ಯಂತ್ರವನ್ನು. “ಒಂದು
ದೇಶ
ಒಂದೇ
ಸಂಸ್ಕೃತಿ” ಎನ್ನುವ
ಮನುವಾದಿಗಳ ಒಳಹುನ್ನಾರಗಳನ್ನು. ಒಕ್ಕೂಟ ವ್ಯವಸ್ಥೆಯನ್ನು ಒಡೆದು ಹಾಕಿ ಕೇಂದ್ರೀಕೃತ ವ್ಯವಸ್ಥೆಯನ್ನು ತರುವ ಕುತಂತ್ರವನ್ನು. ಇದು
ಕೇವಲ
ಚಿತ್ರರಂಗದ ಸಮಸ್ಯೆಯಲ್ಲಾ... ಇಡೀ
ಕನ್ನಡ
ನಾಡಿನ
ಅಸ್ಮಿತೆಯ ಉಳಿವಿನ
ಸಮಸ್ಯೆಯಾಗಿದೆ. ಕನ್ನಡಿಗರ ಸ್ವಾಭಿಮಾನದ ಸಮಸ್ಯೆಯಾಗಿದೆ. ಕನ್ನಡ ರಾಷ್ಟ್ರೀಯತೆ ಸಂಪೂರ್ಣವಾಗಿ ಅಪಾಯದಲ್ಲಿದೆ. ಈ
ಕುರಿತು
ವಿಸ್ತೃತ ಚರ್ಚೆಯಾಗಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ