ಸೋಮವಾರ, ನವೆಂಬರ್ 4, 2013

ಎಲ್ಲಿದ್ದಾರೆ ಮನುಷ್ಯರು? ಕವಿತೆ




ನನ್ನ ಮಗ ಹರ್ಷದಿಂದ ಕೇಳುತ್ತಾನೆ..
"ಅಪ್ಪಾ ನಾನು ಸೂಪರ್ ಮ್ಯಾನ್ ಆಗಲಾ
ಕ್ರಿಷ್ ಆಗಲಾ, ಡಾಕ್ಟರ್ ಆಗಲಾ ಇಲ್ಲಾ  ಆಕ್ಟರ್ ಆಗಲಾ"

ಆತನ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತೇನೆ
"ಏನಾದರಾಗು ಮೊದಲು ಮನುಷ್ಯನಾಗು" ಕಂದಾ.

ಆತನ ಮರು ಪ್ರಶ್ನೆ ನೀನು ಮನುಷ್ಯನಾಗಿದ್ದೀಯಾ ಅಪ್ಪಾ?

"ಅದೇ ಪ್ರಯತ್ನದಲ್ಲಿದ್ದೇನೆ ಮಗನೇ".

ಮನುಷ್ಯನಾಗೋದು ಅಂದರೆ ಏನು ಅಪ್ಪಾ?

"ಮನುಷ್ಯನಾಗೋದು ಅಂದರೆ ಬಯಲಾಗುವುದು
ಎಲ್ಲ ಮೋಹ ಮಮಕಾರ  ಅಹಂ ನಿರಾಕರಿಸುವುದು,
ನಾಮಕೋಟಿಗಳ ಮೀಟಿ ಅನಿಕೇತನಾಗುವುದು ಕಂದಾ"

ಅಂತವರು ಯಾರಿದ್ದಾರಪ್ಪಾ ಈಗ ಜಗದಲ್ಲಿ?

"ಯಾರೂ ಇಲ್ಲವೆನ್ನಿಸುತ್ತಿದೆ ಇನ್ನೂ ಹುಡುಕುತ್ತಿದ್ದೇನೆ."

"ಹಾಗಾದರೆ ಪ್ರಪಂಚದಲ್ಲಿ ಮನುಷ್ಯರೇ ಇಲ್ಲಾ, ಬರೀ ಪ್ರಾಣಿಗಳೇ ಎಲ್ಲಾ?" 

ನಾನು ನಿರುತ್ತರನಾದೆ,

1 ಕಾಮೆಂಟ್‌: