ನಂಬಿದವರು ನನಗೆ ಮೋಸ ಮಾಡಿದ
ತಾಪ ಅಷ್ಟೇನೂ ದೊಡ್ಡದಲ್ಲ.
ಸಂಬಂಧವೊಂದು ಕಳಚಿಬಿದ್ದ
ಪರಿತಾಪ ಸಹಿಸಲಾಗುತ್ತಿಲ್ಲ.
ಮನೋರಂಗದಲ್ಲಿ ನೆನಪುಗಳ
ಹಾವಳಿ ಹೊಸದೇನಲ್ಲ.
ಅಯೋಗ್ಯರ ಸಂಗ ಮಾಡಿದ
ಪಶ್ಚಾತ್ತಾಪ ಕಾಡುತ್ತಿದೆಯಲ್ಲಾ.
ಮಾಡಿದ ನೂರೆಂಟು ಉಪಕಾರಗಳ ಬಿಟ್ಟು
ತಪ್ಪೊಂದೇ ದೊಡ್ಡದಾಯ್ತಲ್ಲಾ.
ಎಷ್ಟೇ ಮಾಡಿದರೂ ಅಷ್ಟೇ ಅನ್ನುವ
ಸತ್ಯ ಸಾಕ್ಷಾತ್ಕಾರವಾಯ್ತಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ