ಯೋಗಿಗಳು ಉತ್ತರದ ಅಧಿಪತ್ಯದಲಿ ಆಸೀನರಾದ ನಂತರ ಮೇಲ್ವರ್ಗದ ಭಕ್ತರಿಗೆ ಕ್ರಾಂತಿಕಾರಿ ಎಂದೆನಿಸುವ ಕ್ರಮ ಕೈಗೊಂಡಿದ್ದಾರೆ. ಖಾಸಗಿ
ವೈದ್ಯಕೀಯ ಹಾಗೂ ಡೆಂಟಲ್ ಕಾಲೇಜುಗಳಲ್ಲಿ ಪರಿಶಿಷ್ಟ ಸಮುದಾಯಕ್ಕಿದ್ದ ಮೀಸಲಾತಿಯನ್ನು
ರದ್ದು ಪಡಿಸುವ ಆದೇಶ ಹೊರಡಿಸಿದ್ದಾರೆ. ಅದೂ ಮೀಸಲಾತಿ ಒದಗಿಸಿ ದಲಿತ ದಮನಿತ ಶೂದ್ರರಿಗೆ
ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದ ಬಾಬಾ ಸಾಹೇಬರ 126 ನೇ ಜನ್ಮ
ಜಯಂತಿಯ ಸಂದರ್ಭದಲ್ಲಿ ಈ ಮೀಸಲಾತಿ ರದ್ದತಿ ಆದೇಶ ಹೊರಡಿಸಲಾಗಿದೆ. ಮೀಸಲಾತಿ
ವಿರೋಧಿಗಳಾದ ಮೇಲ್ವರ್ಗದ ನಕಲಿ ದೇಶಭಕ್ತರು ಕುಂಡಿ ಬಡಿದುಕೊಂಡು
ಕುಣಿದಾಡುತ್ತಿದ್ದಾರೆ.
ಇನ್ನು
ಮೇಲೆ ಉತ್ತರ ಪ್ರದೇಶದ ಕೆಳ ತಳ ಸಮುದಾಯದವರು ಡಾಕ್ಟರುಗಳಾಗುವ ಅಗತ್ಯವಿಲ್ಲ.
ವೈದ್ಯರಾಗುವ ಯೋಗ್ಯತೆ ಏನಿದ್ದರೂ ಸಕಲ ಸವಲತ್ತುಗಳನ್ನು ಹೊಂದಿರುವ ಮೇಲ್ವರ್ಗದವರ
ಮಕ್ಕಳಿಗೆ ಮಾತ್ರ. 'ಯೋಗ್ಯತೆ ಇದ್ದರೆ ಅವರೂ ತಮ್ಮ ಪ್ರತಿಭೆ ತೋರಿಸಿ ಹೆಚ್ಚು ಅಂಕ
ಗಳಿಸಿ ವೈದ್ಯಕೀಯ ಕಾಲೇಜಲ್ಲಿ ಸೀಟು ಗಿಟ್ಟಿಸಿಕೊಳ್ಳಲಿ ಬಿಡಿ' ಎನ್ನುವ ವಾದ ಈ ಉತ್ತಮ
ಕುಲದವರದು. ಹೌದು... ಇನ್ನು ಮೇಲೆ ತಿನ್ನಲು ಪೌಷ್ಟಿಕ ಆಹಾರವೂ ಇಲ್ಲದ ಬಡ ಸಣಕಲರು
ಪುಷ್ಟಿದಾಯಕ ಆಹಾರ ತಿಂದು ಕೊಬ್ಬಿ ಆಧುನಿಕ ತರಬೇತಿ ಪಡೆದ ಪೈಲ್ವಾನರ ಜೊತೆಗೆ
ಸ್ಪರ್ದಿಸಿ ಗೆಲ್ಲಬೇಕು. ಅದೆಷ್ಟೇ ಪ್ರತಿಭೆ ಇದ್ದರೂ ನಿತ್ಯ ಬದುಕಿನ ಆರ್ಥಿಕ
ಬವಣೆಯಲ್ಲಿ ಬೇಯುತ್ತಿರುವ ಕೆಳ ಸಮುದಾಯದ ಯುವಕರು ವಿಪರೀತ ಡೊನೇಶನ್ ಕೊಟ್ಟು ಅತಿರೇಕದ
ಪೀಸ್ ಕಟ್ಟಿ ವೈದ್ಯಕೀಯ ಕಾಲೇಜು ಸೇರಬೇಕು. ಅದೆಲ್ಲಾ ಸಾಧ್ಯವಾಗದೇ ಹೋದರೆ ಡಾಕ್ಟರಾಗುವ
ಕನಸನ್ನು ಮರೆತು ವೈದ್ಯರಾಗುವ ಉತ್ತಮರ ಕ್ಲಿನಿಕ್- ಆಸ್ಪತ್ರೆಗಳಲ್ಲಿ ಕಂಪೌಂಡರ ಕೆಲಸವೂ
ಸಿಗದೆ ವಾಚ್ಮನ್ ಕೆಲಸಕ್ಕೆ ಅರ್ಜಿ ಹಾಕಬೇಕು.
ವೈದ್ಯಕೀಯ ಕಾಲೇಜಲ್ಲಿ ಮೀಸಲಾತಿ ತೆಗೆದು ಹಾಕಿದ್ದು ಮನುವಾದಿ ಅಜೆಂಡಾದ ಅನುಷ್ಠಾನದ ಆರಂಭ ಅಷ್ಟೇ... ಕಂತು ಕಂತುಗಳಲ್ಲಿ ಮೀಸಲಾತಿ ಮರೆಯಾಗುತ್ತಾ ಈ ದೇಶದ ಸಕಲ ಸಂಪತ್ತು ಸವಲತ್ತು ಅವಕಾಶಗಳೆಲ್ಲಾ ಉಳ್ಳವರ ಪಾಲಾಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ದಲಿತ ಶೂದ್ರ ಸಮುದಾಯವು ಈಗಲೇ ಎಚ್ಚೆತ್ತು ಈ ಸಂವಿಧಾನ ವಿರೋಧಿ ಅಕ್ರಮಗಳನ್ನು ಶಾತಾಯ ಗತಾಯ ವಿರೋಧಿಸದೇ ಹೋದರೆ ವರ್ಗ ಅಸಮಾನತೆ ಅತಿರೇಕವಾಗುವುದರಲ್ಲಿ ಸಂದೇಹವಿಲ್ಲ. ಸಂಘ ಪರಿವಾರವನ್ನು ಯಾವಯಾವುದೋ ಕಾರಣಗಳಿಗೆ ಬೆಂಬಲಿಸುವ ಎಸ್ ಸಿ, ಎಸ್ ಟಿ ಹಾಗೂ ಓಬಿಸಿ ಸಮುದಾಯದ ಕೆಲವರು ತಮ್ಮ ಮುಂದಿನ ತಲೆಮಾರು ಮೂಲಭೂತ ಸವಲತ್ತುಗಳಿಂದ ವಂಚಿತವಾಗಿ ಮನುವಾದಿಗಳ ಮನೆಯಲ್ಲಿ ಜೀತ ಮಾಡುವ ದುರಂತದ ಬಗ್ಗೆ ಈಗಲೇ ಎಚ್ಚರ ವಹಿಸಬೇಕಿದೆ.
ಯಾರು ಏನೇ ಹೇಳಲಿ ಈ ದೇಶ ಸಾವಕಾಶವಾಗಿ ಪ್ಯಾಸಿಸ್ಟ್ ಆಡಳಿತದತ್ತ ಒಂದೊಂದೆ ಹೆಜ್ಜೆಗಳನ್ನು ಹಾಕುತ್ತಿದೆ. ಸಂವಿಧಾನವನ್ನು ಅಸ್ತಿರಗೊಳಿಸಿ ಮನುಸ್ಮೃತಿಯಾಧಾರಿತ ವೈದಿಕಶಾಹಿ ಸಂವಿಧಾನವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಈ ಅಪಾಯವನ್ನು ಗ್ರಹಿಸಿ ಪ್ಯಾಸಿಜಂ ಮನಸ್ಥಿತಿಯ ವಿರುದ್ದ ಬಹುಜನರು ಎಚ್ಚೆತ್ತು ಒಟ್ಟಾಗಿ ನಿಂತು ಜನಾಂದೋಲನ ಮಾಡದೇ ಹೋದರೆ... ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸದೇ ಹೋದರೆ ಈ ದೇಶವನ್ನು ಪ್ಯಾಸಿಸ್ಟ್ ಆಡಳಿತದಿಂದ ಪಾರುಮಾಡಲು ಯಾರಿಂದಲೂ ಸಾಧ್ಯವಿಲ್ಲ.. ಮನುವಾದಿಗಳಿಗೆ ಮಾತ್ರ ಬರುವ ಅಚ್ಚೇ ದಿನ್ ಬಹುಸಂಖ್ಯಾತ ದುಡಿಯುವ ವರ್ಗಗಳಿಗಂತೂ ಎಂದೂ ಬರುವುದಿಲ್ಲ...
- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ