ಅಂತೂ ಇಂತೂ ಪ್ರಚಲಿತ ಮುಂಚೂಣಿ ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ್ ಜಿ
ಕಪ್ಪಣ್ಣರವರಿಗೆ 2016 ರ ಬಿ.ವಿ.ಕಾರಂತ ಪ್ರಶಸ್ತಿ ಅನೌನ್ಸ್ ಆಗಿದೆ. ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಕೊಡಮಾಡುವ ಈ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದವರು
ಬಿ.ಜಯಶ್ರೀಯವರು. ತರ್ಕಬದ್ದವಾಗಿ ನೋಡಿದರೆ ಕಾರಂತರ ಹೆಸರಿನ ಈ ಪ್ರಶಸ್ತಿ
ಕೊಡಬೇಕಾಗಿರುವುದು ಕ್ರಿಯಾಶೀಲ ನಿರ್ದೇಶಕರಿಗೆ ಹೊರತು ರಂಗಸಂಘಟಕರಿಗಲ್ಲಾ. ಯಾಕೆಂದರೆ
ಬಿ.ವಿ.ಕಾರಂತರು ಆಧುನಿಕ ಕನ್ನಡ ರಂಗಭೂಮಿಯ ಸೃಜನಶೀಲ ರಂಗ ನಿರ್ದೇಶಕರಾಗಿದ್ದವರು. ಆದರೆ
ಬಿ.ಜಯಶ್ರೀಯವರೊಂದಿಗೆ ಮೊದಲಿಂದಲೂ
ಕೊಡುಕೊಳ್ಳುವ ಸಂಬಂಧವನ್ನು ಹೊಂದಿರುವ ಕಪ್ಪಣ್ಣರವರಿಗೆ ಜಯಶ್ರೀಯವರು ಋಣಸಂದಾಯದ
ಭಾಗವಾಗಿ ಕಾರಂತ್ ಪ್ರಶಸ್ತಿ ಕೊಡಲು ನಿರ್ಣಯಿಸಿದ್ದರಲ್ಲಿ ಅಚ್ಚರಿ ಏನಿಲ್ಲಾ.
ಈ ಆಯ್ಕೆ ಮೂರು ತಿಂಗಳ ಮುಂಚೆಯೇ ನಿರ್ಣಯವಾಗಿತ್ತು. ಆಗಲೇ ಈ ಪ್ರಶಸ್ತಿ ಘೋಷಣೆಯಾಗಬೇಕಿತ್ತು. ಆದರೆ ಸಚಿವೆ ಉಮಾಶ್ರೀಯವರಿಗೆ ಜಯಶ್ರೀಯವರ ಆಯ್ಕೆಯ ಬಗ್ಗೆ ಅಸಮಾಧಾನವಿತ್ತು. ಮರುಪರಿಶೀಲಿಸಲು ಕೇಳಿಕೊಂಡು ಅನೌನ್ಸ್ ಮಾಡುವುದನ್ನು ಸಾಧ್ಯವಾದಷ್ಟೂ ವಿಳಂಬ ಮಾಡಿದರು. ಆದರೆ ಜಯಶ್ರೀಯವರು ಪಟ್ಟು ಸಡಿಲಿಸಲಿಲ್ಲ. ಮರು ಪರಿಶೀಲನೆಗೂ ಒಪ್ಪಲಿಲ್ಲ. ಕೊನೆಗೆ ಅನಿವಾರ್ಯವಾಗಿ ಸಚಿವೆ ಕಪ್ಪಣ್ಣರವರಿಗೆ ಪ್ರಶಸ್ತಿ ಕೊಡಲು ಒಪ್ಪಲೇಬೇಕಾಯ್ತು.
ಕಪ್ಪಣ್ಣನವರ
ಬಗ್ಗೆ ದೂರುಗಳೇನೇ ಇರಲಿ... ಅಸಮಾಧಾನಗಳು ನೂರಾರಿರಲಿ.. ಸ್ವಾರ್ಥಕ್ಕಾಗಿ
ರಂಗಭೂಮಿಯನ್ನು ಬಳಸಿಕೊಂಡ ಆರೋಪಗಳಿರಲಿ... ಆದರೆ ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ
ಅವುಗಳನ್ನೆಲ್ಲಾ ಪಕ್ಕಕ್ಕಿಟ್ಟು ಅಭಿನಂದನೆಗಳನ್ನು ಹೇಳಲೇಬೇಕಿದೆ. ಈ ರಂಗ ರಾಜಕಾರಣಿಯ
ಚತುರತೆಗೆ ಬೆರಗಾಗಿ ಬೇಷ್ ಎನ್ನಲೇಬೇಕಿದೆ. ರಂಗಭೂಮಿಯ ಪ್ರತಿಷ್ಠಿತ ಬಿ.ವಿ.ಕಾರಂತ್
ಪ್ರಶಸ್ತಿ ಪಡೆದ ನಂತರವಾದರೂ ರಂಗಭೂಮಿಯಿಂದ ಕೇವಲ ಪಡೆಯುವುದನ್ನು ಬಿಟ್ಟು
ಸ್ವಾರ್ಥರಹಿತವಾಗಿ ರಂಗಭೂಮಿಗೆ ಕೊಡುವುದನ್ನೂ ಕಪ್ಪಣ್ಣ ರೂಢಿಸಿಕೊಳ್ಳುವ
ಜವಾಬ್ದಾರಿಯನ್ನು ನಿಭಾಯಿಸಲಿ ಎಂಬುದೇ ರಂಗಕರ್ಮಿ ಕಲಾವಿದರ ಆಶಯವಾಗಿದೆ.
ಏನೇ ಆಗಲಿ ರಂಗ ನಿರ್ದೇಶಕ ಕಾರಂತರ ಹೆಸರಿನ ಪ್ರಶಸ್ತಿಯನ್ನು ರಂಗ ಸಂಘಟಕ ಕಪ್ಪಣ್ಣರವರಿಗೆ ಕೊಡಮಾಡಿದ ಬಿ.ಜಯಶ್ರೀಯವರಿಗೂ, ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡ ಕಲಾರತ್ನ ಕಪ್ಪಣ್ಣರವರಿಗೂ ಹಾಗೂ ಆಯ್ಕೆ ಸಮಿತಿಯ ನಿರ್ಣಯಕ್ಕೆ ಸಹಮತ ಇಲ್ಲದಿದ್ದರೂ ಆ ಸಮಿತಿಯ ಅಂತಿಮ ನಿರ್ಣಯವನ್ನು ಗೌರವಿಸಿ ಕಾರಂತ್ ಪ್ರಶಸ್ತಿಯನ್ನು ಕಪ್ಪಣ್ಣರವರಿಗೆ ಕೊಡಲು ಒಪ್ಪಿ ಘೋಷಿಸಿದ ಸಚಿವೆ ಉಮಾಶ್ರೀಯವರಿಗೂ ಅಭಿನಂದನೆಗಳು...
- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ